ಈಗಸ್ಟೆ ಶುರುವಾದರೂ , ಹಳೆಯ ನಂಟಿನ ಛಾಯೇಯು
ಎಲ್ಲ ಬಗೆಯ ಸಂತಸ , ನಮ್ಮದಾದ ಕಲ್ಪನೆಯು
ಜೀವ ಇನ್ನು , ಹಿತವಾದಂತಿದೆ
ನಿನ್ನೆ ನೆನೆದು , ಮೈ ಮರೆತಿದೆ ....
ಎಲ್ಲ ಅಂಶ ಮೀರಿದ , ನೀನೆ ನನ್ನ ಮುಖ್ಯಾಂಶವು
ನಮ್ಮಿಬ್ಬರ ದಿನಚರಿಗೆ , ಪ್ರೀತಿಯೇ ಸಾರಾಂಶವು
ಮೆಲುವಾಗೆ ಮನವ , ದೋಚಿದ ಪರಿಣಾಮವೇ
ಹೃದಯ ನಿನ್ನೆ ಕೊಂಡಾಡಿದೆ ....
ಭಾಷೆ ಭಾಷೆಗೂ ಇಲ್ಲಿ , ಸೊಗಸಾದ ಮಾತಿವೆ
ಮಾತಾನಾಡಿದಸ್ಟು ಇನ್ನು , ಮಾತಾಡಿಸೋ ಭಾವವು
ಎಲ್ಲ ದಿಕ್ಕಿಗೂ ಇಲ್ಲಿ , ಹಲವಾರು ದಾರಿಯು
ನಡೆದಸ್ಟು ದೂರವು , ಜೊತೆಯಾಗೆ ಸಾಗುವೆವು
ಮಾಸದ ಹೂವು ನೀನು , ಸೋಕುವ ತಂಗಾಳಿ ನಾನು
ಇನ್ನು ಸ್ವಲ್ಪ ತಾಕದೇನು , ಅರಳಿ ತುಂಬ ನಗಿಸದೇನು .... ಈ ಗಾಳಿಯು ಜೋರಾಗಲಿ .....
ಈಗಸ್ಟೆ ಶುರುವಾದರೂ , ಹಳೆಯ ನಂಟಿನ ಛಾಯೇಯು
ನಮ್ಮಿಬ್ಬರ ದಿನಚರಿಗೆ , ಪ್ರೀತಿಯೇ ಸಾರಾಂಶವು
ಹೃದಯ ನಿನ್ನೆ ಕೊಂಡಾಡಿದೆ ....
ಎಲ್ಲ ಕಡೆ ಇಂದಲೂ , ಸಮೀಪವಾದಂತೆ ನೀ
ನನ್ನೇ ಹುಡುಕಿ ಹೊರಟಾಗ , ಬಂದು ನಿಂತ ಜಾಗಾವೆ ನೀ
ಬೇರೆ ಬೇರೆ ತರಹದ ಮೋಡಿಯು , ನಿನ್ನ ಪ್ರತಿ ನೋಟದಲ್ಲೂ
ಅರಿತಾಗಸ್ಟೆಯೇ, ಅದರ ಹಂಬಲಿಕೆ ತಿಲಿಯುವುದಿನ್ನು
ಬೆಳದಿಂಗಳ ರೂಪ ನೀನು , ಕುಣಿಯುವ ಅಲೆಯು ನಾನು ....
ಬಂಧಿಸೋ ಕಡಲಿನಲ್ಲು , ಆಸೆಯು ಹೆಚ್ಚುವುದಿನ್ನು .... ಈ ಅಲೆಯು ಜೋರಾಗಲಿ
ಈಗಸ್ಟೆ ಶುರುವಾದರೂ , ಹಳೆಯ ನಂಟಿನ ಛಾಯೇಯು
ಎಲ್ಲ ಬಗೆಯ ಸಂತಸ , ನಮ್ಮದಾದ ಕಲ್ಪನೆಯು
ಮೆಲುವಾಗೆ ಮನವ , ದೋಚಿದ ಪರಿಣಾಮವೇ
ಹೃದಯ ನಿನ್ನೆ ಕೊಂಡಾಡಿದೆ ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ