
ಮಳೆಯಲಿ , ಜೊತೆಯಲಿ , ಬರುವೆಯ , ಖುಷಿಯಲಿ
ಇರುಳಿನ ಬಳಿಯಲಿ , ಮೋಡದ ಮರೆಯಲಿ , ಹೊಸ ಹನಿ ಹುಟ್ಟಲಿ
ಮನವು ನೆನೆಯಲಿ , ಈ ಪ್ರೀತಿ ಹೆಚ್ಚಾಗಲಿ
ಹೊಸ ಕನಸಲಿ , ನೀ ನನಗೆ ದೊರೆಯಲಿ , ಜಗವ ಮರೆಸಲಿ ಮಳೆಯಲಿ , ಜೊತೆಯಲಿ .... ....
ಸಿಗೋವರೆಗೂ ದೂರದೂರು , ಈ ಪಯಣ ಸಾಗುತಿರಲಿ , ಸಿಡಿಲು ಬಡಿದು ಹೇಳೋ ದಾರೀಲಿ ..
ಬೀಸೋವರೆಗೂ ತಂಗಾಳಿ , ನಿನ್ನೆಡೆಗೆ ಮೆಲ್ಲನೆ ದೂಕಲಿ , ನಿನ್ನನ್ನು ಮೆಲ್ಲನೆ ಸೋಕಲಿ ..
ಕೇಳೋವರೆಗೂ ಎದೆಯ ಹಾಡು , ನಿನ್ನ ಸ್ಪರ್ಶ ಅರಿಯದಂತೆ ಸಿಗುತ್ತಿರಲಿ , ಹೀಗೇ ನಿನ್ನದೇ ದಾಟಿಲಿ ..
ಮಳೆಯಲಿ , ಜೊತೆಯಲಿ .... ....
ನಾ ಬರೆಯದ ಕಥೆಯೊಂದ , ಖಾಲಿ ಖಾಲಿ ಅಂಗೈಯಲಿ, ಗೊತ್ತಿರುವಂತೆ ಹನಿಗಳೇ ಬರೆಯಲಿ ..
ಮಾತಾಡುವಂತೆ ಮಾಡಿ ನಿನ್ನು ಕಣ್ಣು , ಹನಿಗಳ ನಡುವಲಿ, ನನ್ನ ಕುದ್ದಾಗಿಯೇ ತಡೆಯಲಿ ..
ಒಂದೇ ಪದದ ಉತ್ತರಕ್ಕೆ , ನಿನ್ನದೇ ಭಾಷೆಯಲಿ , ಆದಸ್ಟು ವಿವರಣೆ ಸಿಗಲಿ ..
ನೆನೆಯುವ ಕ್ಷಣದಲಿ , ಸಮಯವು ನಿಲ್ಲಲ್ಲಿ , ಪರದೆಯು ಸರಿಯಲಿ , ಹೊಸ ಲೋಕವು ತೆರೆಯಲಿ , ಈ ಮಳೆಯೂ ಜೋರಾಗಲಿ , ಈ ಪ್ರೀತಿ ಹೆಚ್ಚಾಗಲಿ ....

