ಭಾನುವಾರ, ಮೇ 27, 2012

ಶನಿವಾರ, ಮೇ 29, 2010

ದೂರ ದೂರ ಹೋದರು ನೀನು.. ....


ದೂರ ದೂರ ಹೋದರು ನೀನು,
ದೂರವಾಗುವುದೇ ನಿನ್ನ ನೆನಪು,
ಇನ್ನು ಉಸಿರಾಟವು ಕಷ್ಟವೇನೆ,
ಮುಂದೇನು ಊಹಿಸಲು ಕಷ್ಟವೇನೆ,
ನಾ ಹೀಗಿದ್ದರೆ ಇಷ್ಟವೇನೆ.. ??

ಇಲ್ಲ ಇಲ್ಲ ಯಾರು ಇಲ್ಲ,
ನೀನೆ ಇಲ್ಲವಾದ ಮೇಲೆ,
ಇನ್ಯಾರ ಕದ್ದು ನೋಡಲಿ ನಾ.. ??

ಸಮಯ ಬೇಗ ಕಳಿಯುತ್ತಿಲ್ಲ,
ಸೋನೆ ಮಳೆಯು ಸುರಿವ ವೇಳೆ,
ಇನ್ಯಾರ ಜೊತೆ ನೆನೆಯಲಿ ನಾ.. ??

ಮಾತು ಮೌನ ಒಂದಾದರೆ,
ಕಣ್ಣೀರಿಗೂ ಬೆಲೆ ಇಲ್ಲವಾದರೆ,
ಎದೆ ನೋವ ಹೇಗೆ ತೋರಿಸಲಿ ನಾ.. ??

ಆಗೋದೆಲ್ಲ ಏನೆ ಆದರು,
ಪ್ರೀತಿಗೆಂದು ಸಾವಿಲ್ಲವೆನ್ನುವರು
ಇನ್ನು ಯಾವ ನೀತಿ ಕೇಳಿಸಲೇ ನಾ.. ??



ಗುರುವಾರ, ಮೇ 20, 2010

ಯಾರಿಗೂ ಹೇಳದೆ , ನನ್ನೆಡೆಗೆ ಬಂದಿರುವೆ …


ಯಾರಿಗೂ ಹೇಳದೆ , ನನ್ನೆಡೆಗೆ ಬಂದಿರುವೆ

ನನ್ನನ್ನು ಮರೆಸಲು , ಒಲವನು ನೀಡಿರುವೆ

ದಾರಿ ಬದಲಾಯಿತು, ನೀ ಕಂಡಾಗಲೇ
ಮುನ ಹೆಚ್ಚಾಯಿತು, ನೀ ಸಿಕ್ಕಗಾಲೆ…. ಇರಲಿ ಎಲ್ಲ ಹೀಗೆಯೇ

ಯಾರಿಗೂ ಹೇಳದೆ , ನನ್ನೆಡೆಗೆ ಬಂದಿರುವೆ



ಪ್ರೀತಿ ಸಂಧಿಸಲು , ನನ್ನೊಳಗೆ ಬಂಧಿಸಲು , ಅವಸರಕೆ ಇಲ್ಲ ತಡೆ
ಭಾವ ಮಿತಿ ಮೀರಲು , ನೀ ನೆನಪಾಗಲು , ನೀನೆ ಕಾಣುವೆ ಎಲ್ಲ ಕಡೆ
ಪ್ರೀತಿ ಮಳೆ ಬೀಳಲಿ , ಮೆಲುವಾಗಿ ಸೋಕಲಿ …. ಇರಲಿ ಎಲ್ಲ ಹೀಗೆಯೇ


ಶುರು ಮಾಡಲು ಕಾರಣ ನೀನಾದರೆ, ಮುಂದುವರೆಸಲು ನಾ ಕಾಯುವೆ
ತೋಚದೆ ಏನು ನೀ ನಿಂತರೆ, ಬಿಡಿ ಬಿಡಿಸಿ ನಾ ತಿಳಿಸುವೆ
ಮನಸು ಹಾಗುರಾಯಿತು ,ನೀ ತುಂಬಿರಲು …. ಇರಲಿ ಎಲ್ಲ ಹೀಗೆಯೇ

ಸೋಮವಾರ, ಏಪ್ರಿಲ್ 5, 2010

ನಾ ಬರೆವೆನು ಅನಿಸಿದಷ್ಟು ....



ನಾ ಬರೆವೆನು ಅನಿಸಿದಷ್ಟು , ಆದಷ್ಟು ಉಳಿಸಿಕೋ ಮನದೊಳಗೆ
ನಾ ನೋಡುವೆನು ಕಾಣುವಷ್ಟು , ಆದಷ್ಟು ಸುಳಿದಿರು ನನ್ ಎದುರು
ನಾ ಕಾಡುವೆನು ಇನ್ನಷ್ಟು , ಸಾಕೆನಿಸುವಷ್ಟು ಮೈ ಮರೆಸು ನೀ ನನಗೆ
ನಾ ಬಯಸುವೆನು ಮತ್ತಷ್ಟು , ಸಾಕೆನಿಸುವಷ್ಟು ನೆನಪಾಗು ನೀ ನನಗೆ


ಅರಿಯದೆ ಹೋಯಿತೇ ಮನಕೆ, ಅದರದೇ ಆಟವು
ತಿಳಿಯುವ ಕ್ಷಣಕೆ ನಿನ್ನನು ನೆನೆದು , ಕಲಿತಿದೆ ಅದರದೇ ಪಾಟವು
ಸರಿ ಇದ್ದರು ಜಗದಲಿ ಎಲ್ಲ , ಆದರು ನನ್ನಲ್ಲಿ ಹೀಗೇಕೇ
ಮನಸನು ನೀ ದೋಚಿದ ಮೇಲೆ , ಈ ಅಂತರ ಬೇಕೇ
ಸಾಕು ಸಾಕು ಎಂದು ತಡೆದರು ನಾ , ಹೊಮ್ಮುತಿದೆ ಒಲವು .... ಮೊದ ಮೊದಲು


ಗೊತ್ತಾಗದೆ ನೀ ನನ್ನ ನೆನೆವೆ , ಸ್ವಲ್ಪ ತಾಳು
ಕೂಗಾಡುತ ನಿನ್ನ ಕರೆವೆನು , ನೀ ಮೆಲ್ಲನೆ ಕೇಳು
ಅಂಗೈಯಲಿ ನಾ ಚಿತ್ರಿಸದೆ , ನೀ ಮೂಡುವುದೇಕೇ
ಬದುಕೇ ನೀನಾದಮೇಲೆ , ಕನಸಿನಲ್ಲಿ ಮಾತ್ರ ಬಂದರೆ ಸಾಕೇ
ಯಾವ ದಿಕ್ಕಿನಲ್ಲೂ ಹೊರಟರು , ನೀನೆ ನನಗೆ ಕೊನೆಯೂ …. ನನ್ನ ನಿಲ್ಲಿಸಲು

ಬುಧವಾರ, ಮಾರ್ಚ್ 31, 2010

ಪರದೆ ಹಿಂದಿರುವೆ....


ಪರದೆ ಹಿಂದಿರುವೆ ,
ಮನಕೆ ಕಾಣಿಸಿರುವೆ ,
ಇನ್ನೊಮ್ಮೆ ನಾ ಸೋಲುವೆ .... ನಿನಗೆ .... ಏನಿದು ಕಾರಣ

ಮನಸು ನಿನ್ನೆಡೆಗೆ ,
ಪಯಣ ಹೊಸ ಕಡೆಗೆ ,
ಪ್ರೀತಿ ಬರಬಯಸಿದೆ .... ನನಗೆ .... ಏನಿದು ಕಾರಣ

ದಿಕ್ಕನು ನೀ ಬದಲಾಯಿಸಿ ,
ಕನಸುಗಳ ನಡುವೆ ನೀ ಕಾಣಿಸಿ ,
ಆಸೆಗಳ ಹೊಸದಾಗಿಸಿ .... ನನ್ನವನಾದೆಯ ....ಮೊದಲನೇ ಬಾರಿಯೇ
ಮನಸು ನಿನ್ನೆಡೆಗೆ .. ... ....

ಮೆಲ್ಲನೆ ನೀ ಸ್ಪರ್ಶಿಸು , ಅಪ್ಪಲು ನಾ ಬೇಡುವೆ
ವೇಗವಾಗೆ ನೀ ಸಂಚರಿಸು , ಹಿಂದ್ ಹಿಂದೆ ನೋಡಲು ಕಾಡುವೆ
ನಾ ತೆರೆದಿಡಲು ಸಾಲುಗಳ , ಹೊಸ ಹೊಸತು ಕಂಪನ ಪದಗಳಿಗೆ
ದಿನ ದಿನ ಸಾಗಿಸುತಿರಲಿ , ಕ್ಷಣ ಕ್ಷಣ ನಿಧಾನಿಸಲಿ , ನೀ ಇದ್ದಾರೆ , ಹೊಸತು ಲೋಕ ನನ್ನಲ್ಲಿ .. ....
ಮನಸು ನಿನ್ನೆಡೆಗೆ .. ... ....

ಬೆಳಗಿನ ಸೂರ್ಯ ನೀ , ಬಾ ನನ್ನ ನೀ ಆರಂಭಿಸು
ನಿಲ್ಲದ ನರ್ತನವೇ , ನಿನ್ನ ಒಲವಿಗೆ ಬಹುಮಾನ
ನಾ ಮಿಡಿಸಲು ತವಕಗಳ , ಜೊತೆ ಜೊತೆಗೆ ಹರುಷವು ನನ್ನೊಳಗೆ
ಬಯಲಿನಲು ಬಂಧಿ ನಾ , ಹೊರಬರಲು ನಿರಕರಿಸುವೆ , ನಿನ್ ಹೆಸರೇ ,ನನ್ನ ಹೊಸತು ಗುರುತಾಗಿದೆ .. ...

ಶನಿವಾರ, ಮಾರ್ಚ್ 13, 2010

ಒಂದೇ ನೋಟದಲ್ಲಿ , ನೀ ನನ್ನ ಗೆದ್ದಿದೆ....




ಒಂದೇ ನೋಟದಲ್ಲಿ , ನೀ ನನ್ನ ಗೆದ್ದಿದೆ
ಒಂದೊಂದು ನೋಟದಲ್ಲೂ , ನೀನೇನೆ ಜಗವಾದೆ
ಒಂದೇ ಒಳ್ಳೆ ಕನಸನ್ನು , ನೀ ನನಗೆ ತೋರಿಸಿದೆ
ಒಂದೊಂದು ಕನಸಲ್ಲೂ , ನೀನೇನೆ ಬದುಕಾದೆ
ಒಂದೇ ಮಾತಲ್ಲಿ , ಹೊಸ ಮೂನ ನೀ ಕೇಳಿಸಿದೆ
ಒಂದೊಂದು ಮಾತಲ್ಲೂ , ಹೊಸ ಹಾಡು ನಾ ಆಲಿಸಿದೆ

ಬಹು ಪಾಲು ಬದುಕಿಗೆ ಉಸಿರನ್ನು ನೀಡಿದೆ , ಉಳಿದ ಪಾಲಿಗೆ ಒಂಟಿತನವ ನೀಡಿದೆ ....
ಓ ಗೆಳತಿ ಹೀಗೇಕೆ , ನನ್ನನ್ನು ನೀ ತೊರೆದೆ.... ಮನದಾಳದ ನಗುವೇ ನೀನು.... ....



ವಿರಹದ ಪರಿಯಲ್ಲಿ , ಹೊಸ ಪರಿಚಯ ನೀ , ಅನಾಮಿಕಳಾಗು ಗೆಳತಿ..
ಕೊನೆಯ ಹೆಜ್ಜೆಗೆ , ಹೊಸತು ದಾರಿ ನೀ , ಸಾಗಿಸುವೇನೆ ಗೆಳತಿ..
ಹಳೆ ಬಾಷೆಯ , ಹೊಸ ಮಾತು ನೀ , ಹೊಸದಾಗೆ ಪಲುಕು ಗೆಳತಿ..
ಹೊಸ ಗಾಳಿ ನೀ , ಹೊಸ ಮಳೆಯೂ ನೀ , ಹೊಸದಾದ ತಂಪು ನೀ ಗೆಳತಿ..
ಹೊಸ ಬಿಸಿಲು ನೀ , ಹೊಸ ನೆರಳು ನೀ , ಹೊಸದಾದ ಕಲ್ಪನೆಯೂ ನೀ ಗೆಳತಿ..
ಮನಸೆಲ್ಲ ನೀ ಆವರಿಸಿದ ಮೇಲೆ , ಬೆಳಕನ್ನು ನೀ ಸುರಿದ ಮೇಲೆ ..... ನಿನಗೆಂದೇ ಈ ಮನಸು ಗೆಳತಿ..


ಯಾರಿರಲಿ ಎಲ್ಲಿರಲಿ , ನನಗಾಗಿ , ಬಳಿಯಲ್ಲಿ ಬಾ ಗೆಳತಿ..
ನೋವಿರಲಿ ನಲಿವಿರಲಿ , ಜೊತೆಯಲ್ಲಿ ಹಂಚಿಕೋ , ಬಾ ಗೆಳತಿ..
ಹುಡುಕಾಟದ ಈ ಬಾಳಲ್ಲಿ , ನೀ ನನ್ನ ಸೇರಲು , ಬಾ ಗೆಳತಿ..
ಕೊನೆ ಇಲ್ಲದ , ಈ ಹಾಡಿಗೆ , ನೀ ಮುಂದೆ ಹಾಡಲು , ಬಾ ಗೆಳತಿ..
ದೂರದ ಮೇಲು , ಹಾಯಾಗಿರೋದ ತಿಳಿಸಿಕೊಡು , ಬಾ ಗೆಳತಿ..
ನನ್ನವಳಾಗಿ ನೀ ನನ್ನೇ ಮರೆತ ಮೇಲು , ಕತ್ತಲೆಯ ಜಗವ ನಾ ಕಂಡಾದ ಮೇಲು .... ನಿನಗೆಂದೇ ಈ ಬದುಕು ಗೆಳತಿ..

ಗುರುವಾರ, ಮಾರ್ಚ್ 4, 2010

ಚೆಲುವನೆ ನಿನ್ನ ಕಂಡರೆ.. ....






ಚೆಲುವನೆ ನಿನ್ನ ಕಂಡರೆ,

ನಗುತ ನೀ ಕರೆದರೆ,

ಸನಿಹವು ಬೆರೆತರೆ,

ನಾ ನಾಚುತ ಹೂವಾಗುವೆ.. ...



ದಾರಿಯಲಿ ನೀ ಸಿಕ್ಕರೆ,

ಜೊತೆಯಾಗಿ ನೀ ಸಾಗಿಸಿದರೆ,

ಆ ಪಯಣದಲಿ ನಾ ಸೋಲುವೆ.. ...


ದೀಪದಂತೆ ನೀ ಬೆಳಗಿದರೆ,

ಮನ ತುಂಬಿ ನೀ ಹರಸಿದರೆ,

ಇರುಳನ್ನು ನೀ ಸರಿಸಿದರೆ,

ಆ ಬೆಳಕಲಿ ನಾ ತೇಲುವೆ.. ...



ಕಣ್ಣುಗಳೆರಡು ಹೇಳಿತು ಏನೋ,

ಮಾತುಗಳು ಬಯಸಿತು ಏನೋ,

ಹೊರಬಾರದೆ ಇದ್ದದ್ದು ಏನೋ,

ಏನಾದರುನು ಇಷ್ಟವೇ.. ...



ನಿನ್ನಿಂದ ಶುರುವಾಯಿತು ಕನಸು,

ಮತ್ತೊಮ್ಮೆ ನೆನೆಯಿತು ಮನಸು,

ಎದೆಯಲ್ಲಿ ಹೊಸತು ಸೊಗಸು,

ಉಳಿದರೆ ಇಷ್ಟವೇ.. ...


ನೀ ನಡೆವ ಹಾದಿಯಲ್ಲಿ,

ನಾನು ಅವಿತಿರುವೆ ಗುರುತಾಗಿ,

ಬೇಕಂದಲೇ ಸ್ಪರ್ಶಿಸು ನೀನು,

ಹೆಚ್ಚಾದರು ಇಷ್ಟವೇ.. ....



ಈ ನಗುವು ನಿನ್ನದೆಯೇನು,

ಸುಖ ಒಂದೇ ಕಾಣಲಿ ಎಂದು,

ನನಗಾಗೆ ನೀಡಿರುವೆ ಏನು,

ಅರಿವಿಲ್ಲದೆ ನಕ್ಕರು ಇಷ್ಟವೇ .. ...



ಖಾಲಿ ಖಾಲಿ ಕಾಗದಲ್ಲಿ,

ನೀ ಬಳಿಯೋ ಬಣ್ಣದಲ್ಲಿ,

ಗೊತ್ತಾಗದೆ ನಾ ಮೂಡಲಿ,

ಹೇಗಾದರುನು ಇಷ್ಟವೇ.. ...