ಹೂವ ನಗುವ ನೋಡಿ , ನಗುತಲಿದೆ ಮುಗ್ಧ ಮನಸು
ಕಣ್ಣ ಅಂಚಿನಲ್ಲಿ , ಇವಳ ಕಾಡಿ ಕುಳಿತಿದೆ ಕನಸು , ಕನಸಿಗೊಂದು ನಲುಮೆಯ ಹೆಸರು , ಹೇಗೆ ಬರೆಯಲಿ
ಏನು ಹೇಳದಂತ ಸಾಲುಗಳ , ಬಿಟ್ಟು ಹೋದಳು ನನ್ನ ಎದೆಗೆ , ಹೆಸರಿಡದ ಆಸೆಗಳಿಗೆ , ಏನೋ ಆಯಿತು
ಎದೆಯ ಕಾಗಧಕ್ಕೆ , ಪ್ರೀತಿ ಸ್ಪರ್ಶ ನೀಡಿದಳು ಇವಳು , ಬಣ್ಣ ಬಳೆದು ಓಡಿದಳು ಏಕೋ , ಯಾರು ಅಲಿಸರು
ಒಲವ ಸುಧೆಯ ಚೆಲ್ಲಿ , ಸುಖವ ಹೊತ್ತು ತಂದಳು ಇವಳು , ಮತ್ತು ಬರೆಸುವಸ್ಟು ಚೆಲುವು , ಹೇಗೆ ಹೇಳಲಿ
ಮನ ತುಂಬಿ ಬಂದ , ಸಂಭ್ರಮದ ಮನೆ ಅಂಗಳದಲ್ಲಿ , ಮೂಡಿತೊಂದು ಸುಂದರ ಕವಿತೆ , ಮಾತೆ ಬಾರದು