ಸೋಮವಾರ, ಏಪ್ರಿಲ್ 5, 2010

ನಾ ಬರೆವೆನು ಅನಿಸಿದಷ್ಟು ....



ನಾ ಬರೆವೆನು ಅನಿಸಿದಷ್ಟು , ಆದಷ್ಟು ಉಳಿಸಿಕೋ ಮನದೊಳಗೆ
ನಾ ನೋಡುವೆನು ಕಾಣುವಷ್ಟು , ಆದಷ್ಟು ಸುಳಿದಿರು ನನ್ ಎದುರು
ನಾ ಕಾಡುವೆನು ಇನ್ನಷ್ಟು , ಸಾಕೆನಿಸುವಷ್ಟು ಮೈ ಮರೆಸು ನೀ ನನಗೆ
ನಾ ಬಯಸುವೆನು ಮತ್ತಷ್ಟು , ಸಾಕೆನಿಸುವಷ್ಟು ನೆನಪಾಗು ನೀ ನನಗೆ


ಅರಿಯದೆ ಹೋಯಿತೇ ಮನಕೆ, ಅದರದೇ ಆಟವು
ತಿಳಿಯುವ ಕ್ಷಣಕೆ ನಿನ್ನನು ನೆನೆದು , ಕಲಿತಿದೆ ಅದರದೇ ಪಾಟವು
ಸರಿ ಇದ್ದರು ಜಗದಲಿ ಎಲ್ಲ , ಆದರು ನನ್ನಲ್ಲಿ ಹೀಗೇಕೇ
ಮನಸನು ನೀ ದೋಚಿದ ಮೇಲೆ , ಈ ಅಂತರ ಬೇಕೇ
ಸಾಕು ಸಾಕು ಎಂದು ತಡೆದರು ನಾ , ಹೊಮ್ಮುತಿದೆ ಒಲವು .... ಮೊದ ಮೊದಲು


ಗೊತ್ತಾಗದೆ ನೀ ನನ್ನ ನೆನೆವೆ , ಸ್ವಲ್ಪ ತಾಳು
ಕೂಗಾಡುತ ನಿನ್ನ ಕರೆವೆನು , ನೀ ಮೆಲ್ಲನೆ ಕೇಳು
ಅಂಗೈಯಲಿ ನಾ ಚಿತ್ರಿಸದೆ , ನೀ ಮೂಡುವುದೇಕೇ
ಬದುಕೇ ನೀನಾದಮೇಲೆ , ಕನಸಿನಲ್ಲಿ ಮಾತ್ರ ಬಂದರೆ ಸಾಕೇ
ಯಾವ ದಿಕ್ಕಿನಲ್ಲೂ ಹೊರಟರು , ನೀನೆ ನನಗೆ ಕೊನೆಯೂ …. ನನ್ನ ನಿಲ್ಲಿಸಲು