ಬುಧವಾರ, ಜನವರಿ 20, 2010

ಹೂವ ನಗುವ ನೋಡಿ ....

ಹೂವ ನಗುವ ನೋಡಿ , ನಗುತಲಿದೆ ಮುಗ್ಧ ಮನಸು

ಕಣ್ಣ ಅಂಚಿನಲ್ಲಿ , ಇವಳ ಕಾಡಿ ಕುಳಿತಿದೆ ಕನಸು , ಕನಸಿಗೊಂದು ನಲುಮೆಯ ಹೆಸರು , ಹೇಗೆ ಬರೆಯಲಿ

ಏನು ಹೇಳದಂತ ಸಾಲುಗಳ , ಬಿಟ್ಟು ಹೋದಳು ನನ್ನ ಎದೆಗೆ , ಹೆಸರಿಡದ ಆಸೆಗಳಿಗೆ , ಏನೋ ಆಯಿತು


ಎದೆಯ ಕಾಗಧಕ್ಕೆ , ಪ್ರೀತಿ ಸ್ಪರ್ಶ ನೀಡಿದಳು ಇವಳು , ಬಣ್ಣ ಬಳೆದು ಓಡಿದಳು ಏಕೋ , ಯಾರು ಅಲಿಸರು

ಒಲವ ಸುಧೆಯ ಚೆಲ್ಲಿ , ಸುಖವ ಹೊತ್ತು ತಂದಳು ಇವಳು , ಮತ್ತು ಬರೆಸುವಸ್ಟು ಚೆಲುವು , ಹೇಗೆ ಹೇಳಲಿ


ಮನ ತುಂಬಿ ಬಂದ , ಸಂಭ್ರಮದ ಮನೆ ಅಂಗಳದಲ್ಲಿ , ಮೂಡಿತೊಂದು ಸುಂದರ ಕವಿತೆ , ಮಾತೆ ಬಾರದು

ಎದೆ ಗೂಡಿನಿಂದ , ಉಕ್ಕಿ ಬಂದಿತು ಇವಳ ಪ್ರೀತಿ , ಮಾನವ ಸುಖಿಸುವಂಥ ರೀತಿ , ಹೇಗೆ ಮರೆಯಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ