ಭಾನುವಾರ, ಜನವರಿ 17, 2010

ಯಾರೋ....

ಯಾರ ಒಲವ , ಒಲುಮೆ ಕರೆಗೆ , ಯಾರು ಕಾಯುವರೋ
ಮನದ ಬಾಗಿಲ , ತಟ್ಟಿ ಬಂದು , ನಗುವ ತರಿಸುವರೋ

ಯಾರ ಕವಿತೆಯ , ಯಾವ ಸಾಲು , ಯಾರ ಬೇಡುವುದೋ
ಕಾದು ಕುಳಿತ , ನೆನಪುಗಳನು , ಮತ್ತೆ ಕೆಣಕುವುದೋ

ಯಾರ ತೋಟದ , ಯಾವ ಹೂವು , ಎಂದು ಅರಳುವುದೋ
ಅರಳಿ ನಗಿಸಿ , ಮಾನವ ಸುಖಿಸಿ , ಯಾರ ಸೇರುವುದೋ

ಯಾವ ದೀಪ , ಯಾರ ಮಾನವ , ಉರಿದು ಬೆಳಗುವುದೋ
ಬೆಳಗಿ ಸಿರಿಯಾ , ಸುಖದ ಹೊರೆಯ , ಹೊತ್ತು ತರುವುದೋ

ಯಾರ ಮೊಗವ , ಕದ್ದು ನೋಡಿ , ಯಾರು ಸೋಲುವರೋ
ಸೋತು ಸೊರಗಿ , ನೀನೆ ನನಗೆ , ಅಂತ ಕೂಗುವರೋ

1 ಕಾಮೆಂಟ್‌: