
ಯಾರಿಗೂ ಹೇಳದೆ , ನನ್ನೆಡೆಗೆ ಬಂದಿರುವೆ
ನನ್ನನ್ನು ಮರೆಸಲು , ಒಲವನು ನೀಡಿರುವೆ
ಈ ದಾರಿ ಬದಲಾಯಿತು, ನೀ ಕಂಡಾಗಲೇ
ಈ ಮುನ ಹೆಚ್ಚಾಯಿತು, ನೀ ಸಿಕ್ಕಗಾಲೆ…. ಇರಲಿ ಎಲ್ಲ ಹೀಗೆಯೇ
ಯಾರಿಗೂ ಹೇಳದೆ , ನನ್ನೆಡೆಗೆ ಬಂದಿರುವೆ
ಪ್ರೀತಿ ಸಂಧಿಸಲು , ನನ್ನೊಳಗೆ ಬಂಧಿಸಲು , ಈ ಅವಸರಕೆ ಇಲ್ಲ ತಡೆ
ಭಾವ ಮಿತಿ ಮೀರಲು , ನೀ ನೆನಪಾಗಲು , ನೀನೆ ಕಾಣುವೆ ಎಲ್ಲ ಕಡೆ
ಪ್ರೀತಿ ಮಳೆ ಬೀಳಲಿ , ಮೆಲುವಾಗಿ ಸೋಕಲಿ …. ಇರಲಿ ಎಲ್ಲ ಹೀಗೆಯೇ
ಶುರು ಮಾಡಲು ಕಾರಣ ನೀನಾದರೆ, ಮುಂದುವರೆಸಲು ನಾ ಕಾಯುವೆ
ತೋಚದೆ ಏನು ನೀ ನಿಂತರೆ, ಬಿಡಿ ಬಿಡಿಸಿ ನಾ ತಿಳಿಸುವೆ
ಮನಸು ಹಾಗುರಾಯಿತು ,ನೀ ತುಂಬಿರಲು …. ಇರಲಿ ಎಲ್ಲ ಹೀಗೆಯೇ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ