ಶನಿವಾರ, ಫೆಬ್ರವರಿ 20, 2010

ಇನ್ನು ಸ್ವಲ್ಪವೇ ....

ಯಾರಿಗೂ ಹೇಳದೇನೆ , ನೀ ಬಂದು ನಿಂತಿರುವೆ
ಒಮ್ಮೆಯೂ ಹೋಗದೇನೆ , ನನ್ನಲ್ಲೇ ಬೆರೆತಿರುವೆ
ಸೋತಿರುವೆ ನಿನಗೆ ಹೀಗೆಯೇ
ಮರಳಿ ನನ್ನ ನೋಡೇ ಹುಡುಗಿ …………………………ಇನ್ನು ಸ್ವಲ್ಪವೇ
ಯಾರಿಗೂ ಹೇಳದೇನೆ …………

ಮನಸಿನ ನೂರು ಕಣ್ಣು , ನಿನ್ನನೇ ಕಂಡಿವೆ ಎಂತೆ
ಪ್ರೀತಿ ತುಂಬಿರೋ ಹೃದಯ , ನಿನಗಾಗೆ ಕಾದಿದೆ ಎಂತೆ
ಹೃದಯದಿ ಬರುವ , ಸಾವಿರ ಮಾತಿಗೆ , ನಿನ್ನದೇ ಹೆಸರನು ಬರೆದಿಡುವೆ
ನಿನಗಿನ್ನು ನಾ ಹಿಡಿಸಿಲ್ಲವೇ
ಮರಳಿ ಹೃದಯ ಚುಂಬಿಸೆ ಹುಡುಗಿ ….………………ಇನ್ನು ಸ್ವಲ್ಪವೇ
ಯಾರಿಗೂ ಹೇಳದೇನೆ …………

ಒಂಟಿಯಾಗಿಯೇ ನಾನಿಲ್ಲಿ ಮೊದಲ ಬೇಟಿಗೆ ಕಾದಿಹೆನು
ನಿನ್ನ ಮೊದಲ ಉಸಿರು ಮೈ ಸೋಕೋ ಘಳಿಗೆಗೆ , ಎಲ್ಲವ ಮರೆಯುವೆನು
ಬೀಸುವ ಗಾಳಿಯು ತರದ ತಂಪ್ಪನು ನಿನ್ನಯ್ಯ ಉಸಿರಲಿ ಕಂಡಿರುವೆ
ಮರಿಯಬೇಡ ಹುಡುಗಿಯೇ ಇನ್ನು ………………..ಇನ್ನು ಸ್ವಲ್ಪವೇ
ಯಾರಿಗೂ ಹೇಳದೇನೆ …………

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ